26th June 2025

ಚಡಚಣ; ಚಡಚಣ ಪಟ್ಟಣದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ರೈತ ರಮೇಶ ಮಲ್ಲಾಡಿ ಅವರ ತೋಟದ ಮನೆಯಲ್ಲಿ ಅವರ ಮಕ್ಕಳಾದ ವೀರಾಟ ಮತ್ತು ಸಾಮ್ರಾಟ ಅವರು ಸಂಭ್ರಮದಿAದ ಜೋಡೆತ್ತುಗಳನ್ನು ಕೈಯಾರೆ ತಯಾರಿಸಿ ಪೂಜೆ ಸಲ್ಲಿಸುವ ದೃಶ್ಯ ಗಮನಸೆಳೆಯಿತು. ಎತ್ತು, ದನ-ಕರುಗಳ ಮೈ ತೊಳೆದು ವಿಶೇಷವಾಗಿ ಸಿಂಗರಿಸಿ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ದೇವರ ಜಗುಲಿ ಮೇಲಿಟ್ಟು ಸಹ ಕುಟುಂಬದವರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು. ಮನೆಯಲ್ಲಿ ತಯಾರಿಸಿದ ವಿವಿಧ ಭಕ್ಷ ಭೋಜನವನ್ನು ಎತ್ತುಗಳಿಗೆ ನೈವೇದ್ಯ ಮಾಡಿ ಉಣಬಡಿಸಿದರು.ನಂತರ ಕುಟುಬಂದವರೆಲ್ಲರೂ ಸಿಹಿ ಭೋಜನ ಸವಿದು ಸಂಭ್ರಮಿಸಿದರು.ಈ ಸಂಪ್ರದಾಯ ಪೂರ್ವ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಹೊಲದಲ್ಲಿ ಮುಂಗಾರು ಬಿತ್ತನೆಯ ಕೆಲಸ ಮುಗಿದ ನಂತರ ಬಂದಿರುವ ಹಬ್ಬ ಇದಾಗಿದೆ.ಮಣ್ಣೆತ್ತಿನ ಅಮಾವಾಸ್ಯೆ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಆಚರಿಸುತ್ತಾರೆ ಈ ದಿನ ಮೃದುವಾದ ಜೇಡಿ ಮಣ್ಣಿನಿಂದ ತಮ್ಮ ಕೈಯಾರೆ(ಕುಂಬಾರಣ್ಣ)ತಯಾರಿಸಿದ ಜೋಡಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಭೂಮಿ ಮತ್ತು ರೈತರ,ಎತ್ತುಗಳ ನಡುವಿನ ಅವಿನಾಭಾವ ಸಂಬAಧವನ್ನು ಸೂಚಿಸುತ್ತದೆ.ಎತ್ತುಗಳು ಭೂಮಿಯಿಂದ ಆಹಾರ ಉತ್ಪಾದಿಸುವ ಮೂಲಕ ತಮ್ಮ ಸಂಗಾತಿ ಗೋವುಗಳಿಗೆ ಮತ್ತು ಮಾನವನ ಜೀವನವನ್ನು ರಕ್ಷಿಸುತ್ತದೆ.
ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಪ್ರತಿವರ್ಷ ಜೇಷ್ಠ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಡಗರ ಸಂಭ್ರಮದಿAದ ರೈತರು ವಿಶೇಷವಾಗಿ ಆಚರಿಸುತ್ತಾರೆ.ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಜೋಡೆತ್ತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ.
ಬೇಸಿಗೆಯ ಕಡು ಬಿಸಿಲಿನಲ್ಲಿ ಹೋಲ ಹಸನಾಗಿಡಲು, ವೈಶಾಖ ಮಾಸ ಮುಗಿದು,ಪುನರ್ವಸು ಮಳೆ ಆರಂಭವಾದಾಗ ಕೃಷಿ ಚಟುವಟಿಕೆಗಳು ಮಳೆಯಾದೊಡನೆ ಬೀಜ ಬಿತ್ತುವ ಕೆಲಸ ಕೂಡಾ ರೈತನೊಂದಿಗೆ ಸೇರಿ ಮಾಡುತ್ತವೆ ಹಾಗಾಗಿ ಜೋಡೆತ್ತುಗಳು ರೈತಸಮೂಹದ ಜೀವನಾಡಿ ಎಂದೆನಿಸಿಕೊAಡಿವೆ.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ